ಅಜೋóರ್ಸ್ ದ್ವೀಪಗಳು

	ಅಟ್ಲಾಂಟಿಕ್ ಮಹಾಸಾಗರಲ್ಲಿ 30(-40( ಉ, ಅ; 25(-31( ಪ.ರೇ.ಗಳವರೆಗೆ ಹರಡಿವೆ. ಸಾವೋ ಮಿಗಲ್ ದೊಡ್ಡ ದ್ವೀಪ. ಇತರ ದ್ವೀಪಗಳೆಂದರೆ-ಸಾಂತಾ ಮೇರಿಯಾ, ಫಾರ್ಮಿಗಸ್, ರಾಕ್ಸ್, ಟೆರಿಸೀರಾ, ಗ್ರೇಷಿಯಸಾ, ಸಾವೊ, ಜೋರ್ಗಾ, ಪಿಕೊ, ಫಯಾಲ ಮತ್ತು ಫ್ಲೋರ್ಸ್ ಕಾರ್ವೊ. ಈ ದ್ವೀಪಗಳ ಒಟ್ಟು ವಿಸ್ತೀರ್ಣ 900. ಚ. ಮೈಲಿಗಳು. 

	1445ರಲ್ಲಿ ದ್ವೀಪಗಳನ್ನು ಪೋರ್ಚುಗೀಸರು ಕಂಡುಹಿಡಿದರು. 1580 ರಿಂದ 1640ರವರೆಗೆ ಈ ದ್ವೀಪಗಳು ಸ್ಪೇನಿನ ವಶದಲ್ಲಿದ್ದವು. 1823 ರಿಂದ 1833 ರವರೆಗೆ ಪೋರ್ಚುಗೀಸರಿಗೂ ಸ್ಪೇನಿನವರಿಗೂ ಹೋರಾಟ ನಡೆದು, ಪೋರ್ಚುಗೀಸರು ಪುನಃ ಈ ದ್ವೀಪಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈಗಲೂ ಇವು ಪೋರ್ಚುಗಲ್ ಸಾಮ್ರಾಜ್ಯಕ್ಕೆ ಸೇರಿವೆ. ಇಲ್ಲಿನ ಜನಸಂಖ್ಯೆಯಲ್ಲಿ ಅವರದೇ ಮೇಲುಗೈ.

	ಈ ದ್ವೀಪಗಳು ಹೆಚ್ಚು ಮಲೆಸೀಮೆಯಾಗಿದ್ದು, ಇಲ್ಲಿ ಅನೇಕ ಜ್ವಾಲಾಮುಖಿಗಳಿವೆ. ಆದ್ದರಿಂದ ಆಗಾಗ್ಗೆ ಭೂಕಂಪಗಳುಂಟಾಗುತ್ತವೆ. ಬಿಸಿನೀರಿನ ಅನೇಕ ಬುಗ್ಗೆಗಳಿವೆ. ಹವಾಮಾನ ಸಮಶೀತೋಷ್ಣವಾಗಿದೆ. ಜವರ ಮುಖ್ಯ ಉದ್ಯೋಗ ಬೇಸಾಯ ಮತ್ತು ಪಶುಪಾಲನೆ. ಇಲ್ಲಿಯ ಮುಖ್ಯ ಹುಟ್ಟುವಳಿಗಳೆಂದರೆ-ಗೋಧಿ, ದ್ವಿದಳ ಧಾನ್ಯಗಳು, ತಂಬಾಕು, ಆಲೂಗಡ್ಡೆ, ಅನಾನಸ್, ಕಿತ್ತಳೆ ಮತ್ತು ಬಾಳೆ. ಮದ್ಯ, ಹಣ್ಣು ಹಂಪಲು, ಗಿಣ್ಣು, ಬೆಣ್ಣೆ, ದನ ಮತ್ತು ಹಂದಿಗಳ ಮಾಂಸ-ಇವು ರಫ್ತಾಗುತ್ತವೆ. ಫಯಾಲ ದ್ವೀಪದಲ್ಲಿ ಹೋರ್ಟಾ ಎಂಬುದು ಉತ್ತಮ ಬಂದರು. ಟರ್ಸೀರ ದ್ವೀಪಗಳಲ್ಲಿ ಅಂಗ್ರಾ ಎಂಬುದು ದೇಶದ ರಾಜಧಾನಿ. ಈ ದ್ವೀಪದಲ್ಲಿ ವಾಸಿಸುವವರಲ್ಲಿ ಪೋರ್ಚುಗೀಸರ ಸಂಖ್ಯೆಯೇ ಹೆಚ್ಚು.				
(ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ